ಆನ್‌ಲೈನ್ ದುಡ್ಡು ಸಂಪಾದಿಸಲು ಜನರು ಮಾಡುವ 5 ದೊಡ್ಡ ತಪ್ಪುಗಳು – ನಿಜವಾದ ಆದಾಯಕ್ಕೆ ನಿಮ್ಮ ಹಾದಿ ಇಂತಿದೆ!
📝 ವಿಷಯ:
ಈಗಿನ ದಿನಗಳಲ್ಲಿ ಎಲ್ಲರಿಗೂ ಆನ್‌ಲೈನ್‌ನಲ್ಲಿ ದುಡ್ಡು ಸಂಪಾದಿಸುವ ಆಸೆ ಇದೆ. ಆದರೆ ಪ್ರಾರಂಭದಲ್ಲಿಯೇ ಕೆಲವರು ತಪ್ಪು ಮಾರ್ಗಗಳಲ್ಲಿ ಹೋಗಿ ಸಮಯ, ಶ್ರಮ ಮತ್ತು ಹಣದ ನಷ್ಟಕ್ಕೆ ಗುರಿಯಾಗುತ್ತಾರೆ.
ಈ ಬ್ಲಾಗಿನಲ್ಲಿ ನಾವು ನೋಡೋಣ, ಜನರು ಸಾಮಾನ್ಯವಾಗಿ ಮಾಡೋ 5 ತಪ್ಪುಗಳು ಮತ್ತು ಅದರಿಂದ ಹೇಗೆ ದೂರ ಇರಬೇಕು ಅನ್ನೋದನ್ನು ಸ್ಪಷ್ಟವಾಗಿ ತಿಳಿಯೋಣ.
---
❌ 1. ತಕ್ಷಣಕ್ಕೆ ಹಣ ಬರುವ ಆಸೆ – "ಇಂದು ಜಾಯಿನ್ ಮಾಡಿ, ನಾಳೆ ₹5000 ಸಂಪಾದಿಸಿ!"
ಇದು ಮೋಸದ ಗ್ಯಾರಂಟಿ!
ಹೆಚ್ಚಾಗಿ ಇಂಥಾ ಜಾಹೀರಾತುಗಳು ನಿಜವಲ್ಲ. ನೀವು ಯಾವುದೇ ಹಕ್ಕುಪತ್ರ ಇಲ್ಲದ ವೆಬ್‌ಸೈಟ್‌ಗಳು ಅಥವಾ WhatsApp groups ನಲ್ಲಿ ಬಂದ ಮೆಸೇಜ್ಗಳನ್ನೂ ಯೋಚಿಸದೆ ಪ್ರೆಸ್ಸ್ ಮಾಡುವುದು .
✅ ಉಪಾಯ:
ಎಂದಿಗೂ "ತಕ್ಷಣ ಹಣ" ಎಂಬ ವಾಗ್ದಾನಗಳಲ್ಲಿ ಬಿದ್ದು ಹೋಗಬೇಡಿ. ನಿಜವಾದ ಆದಾಯಕ್ಕೆ ನಿಮಗೆ ಸಮಯ, ಶ್ರಮ, ಹಾಗೂ ಶ್ರದ್ಧೆ ಇರಬೇಕು.
---
❌ 2. ಒಂದು ದಾರಿ ಹಿಡಿಯದೆ ಎಲ್ಲದರ ಹಿಂದೆ ಓಡುವುದು
ಜನರು ಒಂದು ದಿನ YouTube ಚಾನೆಲ್ ಪ್ರಾರಂಭಿಸುತ್ತಾರೆ, ನಾಳೆ blogging, ಮರುದಿನ freelancing – ಹೀಗೆ ಎಲ್ಲ ಕಡೆ ಪ್ರಯತ್ನಿಸಿ ಯಾವದಲ್ಲಿಯೂ ನಿಜವಾದ ಗಂಭೀರತೆ ಕೊಡುವುದಿಲ್ಲ.
✅ ಉಪಾಯ:
ಒಂದು ಮಾರ್ಗ ಆರಿಸಿ (ಮನಸ್ಸಿನಿಂದ): Blogging, Freelancing, YouTube – ಯಾವದು ನಿಮಗೆ ಖುಷಿ ಕೊಡುತ್ತದೋ ಅದನ್ನು minimum 3 ತಿಂಗಳು ಶ್ರದ್ಧೆಯಿಂದ ಮಾಡಿ, ಹಣದ ಹಿಂದೆ ಹೋಗಬೇಡಿ ನಿಮಗೆ ಖುಷಿ ಅನಿಸುವ ಕೆಲಸದ ಹಿಂದೆ ಹೋಗಿ ಹಣ ತಾನಾಗಿಯೇ ಬರುತ್ತದೆ.
---
❌ 3. Skills ಕಲಿಯೋದು ಬಿಟ್ಟು ಕೇವಲ ದುಡ್ಡಿನ ಬಗ್ಗೆ ಯೋಚಿಸುವುದು
Onlineಲ್ಲಿ ನೀವು ದುಡ್ಡು ಸಂಪಾದಿಸಬೇಕು ಅಂದ್ರೆ, ನಿಮ್ಮ ಬಳಿ ಒಂದು ಮೌಲ್ಯ ಅಥವಾ ಕೌಶಲ್ಯ ಇರಬೇಕು. ಗೂಗಲ್ ಅಥವಾ AI tools ಮಾತ್ರ ಉಪಯೋಗಿಸಿ ಯಶಸ್ವಿಯಾಗೋದು ಸಾಧ್ಯವಿಲ್ಲ.
✅ ಉಪಾಯ:
1 ಸ್ಕಿಲ್ ಆರಿಸಿ – Content Writing, Canva Design, Video Editing, Voice Over, Translation ಇತ್ಯಾದಿ –
YouTube/Free Courses/Blogನಲ್ಲಿ ಕಲಿಯಿರಿ.
ಈ ವಿಷಯಕ್ಕೆ ಸಂಬಂಧಪಟ್ಟ ಬ್ಲಾಗ್ ನಾನು ಮೊದಲೇ ಒಂದು ಬರೆದಿದ್ದೇನೆ ಓದಲು ಇಚ್ಛೆ ಇದ್ದರೆ ಈ ಲಿಂಕ್ ಅನ್ನು ಪ್ರೆಸ್ಸ್ ಮಾಡಿ👇
http://gyanasiri.blogspot.com/2025/07/blog-post.html
---
❌ 4. ದುಡ್ಡು ಕೇಳುವಂತಹ ವೆಬ್‌ಸೈಟ್‌ಗಳಿಗೆ ಹಣ ನೀಡುವುದು.
ಕೆಲವರು "₹500 ಕೊಡಿ, ₹5000 ಮನೆಗೆ ಬರಲಿದೆ" ಅಂತಾ ಹೇಳೋ website ನಂಬಿ ಹಣ ಕಳಿಸುತ್ತಾರೆ. ಇದರ ಪರಿಣಾಮ: ಮೊಸಹೋಗುವುದು.ಹೀಗೆ ಪೋಸ್ಟ್ ನಲ್ಲಿ ಹಣ ಬರುತ್ತೆ ಮೊದಲು ಹಣ ವರ್ಗಾವಣೆ ಮಾಡಲು ಸ್ವಲ್ಪ ಹಣ ನೀಡಬೇಕಾಗುತ್ತದೆ ಅಂತ ಹೇಳುವುದು ಇದರಿಂದವು ಮೋಸ ಹೋಗುತ್ತೀರಿ.
✅ ಉಪಾಯ:
ಎಂದೂ ಯಾವುದೇ website ಅಥವಾ app ಗೆ ಹಣ ಕೊಡುವ ಮುಂಚೆ ಈ 3 ವಿಚಾರ ನೋಡಿ:
*ಆ Website Google ನಲ್ಲಿ famous ಇದೆಯಾ?
*YouTube ನಲ್ಲಿ review ಇದೆಯಾ?
*Trustpilot ಅಥವಾ Quoraನಲ್ಲಿ feedback ಇದೆಯಾ?
---
❌ 5. Link ಮಾಡದೆ ಕಂಟೆಂಟ್ ಬರೆದು ಬಿಡುವುದು
ಮಾಡುವುದು ಸರಳ – ಆದರೆ ಬಹುತೇಕ ಜನರು ತಾವು ಬರೆದ Blog, YouTube channel ಅಥವಾ Freelance ಸೈಟ್ ಅನ್ನು promote ಮಾಡೋದನ್ನ ಮರೆಯುತ್ತಾರೆ, ನೀವು ವಿಡಿಯೋ ಅಥವಾ ಬ್ಲಾಗ್ ಮಾಡುವುದು ಸುಲಭ ಆದರೆ ಅದನ್ನು promote ಅಂದರೆ ಪ್ರಚಾರ ಮಾಡುವುದು ಕಷ್ಟ ನೀವು ಪ್ರಚಾರ ಮಾಡದಿದ್ದರೆ ನಿಮ್ಮ ಬ್ಲಾಗ್ ಅಥವಾ ವಿಡಿಯೋ ವೈರಲ್ ಆಗುವುದಿಲ್ಲ.
✅ ಉಪಾಯ:
– Pinterest, Reddit, Medium, quora, Telegram, WhatsApp groups ಎಲ್ಲವೂ ಸರಿಯಾದ ಪ್ರಮೋಟ್ ಮಾಡುವ ಅಸ್ತ್ರವಾಗಿದೆ.
– Quora banned ಆದರೆ ಬೇರೆ ಮಾರ್ಗಗಳಿವೆ. ಪ್ರಮೋಟ್ ಮಾಡದ ಬ್ಲಾಗ್ viral ಆಗಲ್ಲ! (Quora ಒಮ್ಮೊಮ್ಮೆ ಹೆಚ್ಚು ಪ್ರಮೋಟ್ ಮಾಡಿದರೆ ಬ್ಲಾಕ್ ಮಾಡುತ್ತಾರೆ)
---
✅ ನೀವು ಪಾಲಿಸಬೇಕಾದ ನಿಜವಾದ ಹಾದಿ:
✔️ ಒಂದು ಸರಿಯಾದ ದಾರಿ ಆರಿಸಿ – Blogging, Freelancing, Affiliate Marketing, YouTube ಮನಸ್ಸಿನ ಇಚ್ಛೆ ಇಂದ ಆರಿಸಿ .
✔️ ಕಡಿಮೆ ಅಂದರೂ 3 ತಿಂಗಳು ನಿಯತ್ತಿನಿಂದ ಕಷ್ಟ ಪಟ್ಟು ಅದೇ ದಾರಿಯಲ್ಲಿ ನಡೆಯಿರಿ.
✔️ Free tools (Canva, ChatGPT, Google Trends) ಉಪಯೋಗಿಸಿ, ಇವೆಲ್ಲವೂ ಉಚಿತ ಸೇವೆ ನೀಡುವ ವೆಬ್ ಸೈಟ್ ಆಗಿದೆ ಇದರಿಂದ ನೀವು ಕೌಶಲ್ಯವನ್ನು ಕಲಿಯಬಹುದು
✔️ ನೀವೀಗ ಈ blog ಓದಿದ ಹಾಗೆ, ಇತರರಿಗೆ ಸಹ ನಿಜವಾದ ಮಾರ್ಗ ತೋರಿಸಿ, ಈ ಬ್ಲಾಗ್ ಅನ್ನು ನಿಮ್ಮ ಮಿತ್ರರಿಗೆ ಹಂಚಿ ಹಾಗೂ ಆನ್ಲೈನ್ ಇಂದ ಮೋಸ ಹೋಗುವುದನ್ನು ತಡೆಗಟ್ಟಿ...🙏
---
📌 ಮುಕ್ತಾಯ:
ನಿಮ್ಮ ಆದಾಯ ಯಾವ ಮಾರ್ಗದಲ್ಲಿ ಬರುತ್ತದೆ ಅಂತ ಹೇಳೋದು ಯಾರಿಂದಲೂ ಸಾಧ್ಯವಿಲ್ಲ. ಆದರೆ ತಪ್ಪುಗಳನ್ನು ತಪ್ಪಿಸಿ, ಸರಿಯಾದ ದಾರಿಯಲ್ಲಿ ಹೋದರೆ ನೀವು ಖಂಡಿತಾ Online ಇಂದ ದುಡ್ಡು ಸಂಪಾದನೆ ಮಾಡಬಹುದು.ಯಾವುದೇ ಕೆಲಸವಾದರು ಮನಸ್ಸಿನ ಇಚ್ಛೆ ಇಂದ ಮಾಡಬೇಕು ಆಗ ಮಾತ್ರ ಮಾಡಿದ ಕೆಲಸದಿಂದ ನೆಮ್ಮದಿ ದೊರೆಯುತ್ತದೆ, ಹಾಗೂ ಸ್ವಲ್ಪ ಹಣ ಗಳಿಸಿದರು ಖುಷಿ ಇಂದ ಇರುತ್ತೇವೆ. ನೀವು ಯಾವುದೇ ವೃತ್ತಿ ಅಲ್ಲಿ ಹೋದರು ನಿಮಗೆ ಒಳ್ಳೆಯ ದಾರಿ ಹಾಗೂ ಭವಿಷ್ಯಸಿಗಲಿ ಎಂದು ಮಹಾಕಾಲ ದೇವರ ಬಳಿ ಪ್ರಾರ್ಥಿಸುತ್ತಾ ನನ್ನ ಬ್ಲಾಗ್ ಮುಗಿಸುತ್ತಿದ್ದೇನೆ 🙏.
ಬ್ಲಾಗ್ ಇಷ್ಟವಾದರೆ like♥️ ಮಾಡಿ ಯಾವುದೇ ವಿಷಯದ ಬಗ್ಗೆ ತಿಳಿಯಬೇಕಿದ್ದರೆ ಸಂಕೋಚವಿಲ್ಲದೆ comment😇 ಮಾಡಿ.
ಧನ್ಯವಾದಗಳು...



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ